ನವ ಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಯಲ್ಲಿ ಮಂಗಳವಾರ ಬಿ.ಎಸ್.ಯಡಿಯೂರಪ್ಪ ಅವರು ಕನ್ನಡಕವನ್ನು ಕಳೆದುಕೊಂಡಿದ್ದಾರೆ. ಪರಿವರ್ತನಾ ಯಾತ್ರೆ ಮಂಗಳವಾರದಂದು ದೇವದುರ್ಗ ಕ್ಷೇತ್ರದ ಮೂಲಕ ರಾಯಚೂರು ಜಿಲ್ಲೆಗೆ ಪ್ರವೇಶ ಪಡೆದಿದ್ದು, ರಾಯಚೂರು ನಗರದಲ್ಲಿ ಮಂಗಳವಾರ ರಾತ್ರಿ ಯಾತ್ರೆ ಅಂಗವಾಗಿ ನಡೆದ ಸಮಾವೇಶದಲ್ಲಿ ಯಡಿಯೂರಪ್ಪ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದ ಸಂದರ್ಭದಲ್ಲಿ ಅವರ ಕನ್ನಡಕ ಕಳೆದುಹೋಗಿದೆ ಎಂದು ತಿಳಿದುಬಂದಿದೆ. ಕನ್ನಡಕ ಕಳೆದಿರುವುದರಿಂದ ಯಡಿಯೂರಪ್ಪ ಅವರ