ಕಲಬುರಗಿ: ಯಡಿಯೂರಪ್ಪ ಬರೀ ಪುಂಗಿ ಊದುತ್ತಾರೆ ಹೊರತು, ಅವರ ಬುಟ್ಟಿಯಲ್ಲಿ ಹಾವೇ ಇಲ್ಲ. ಹೋದಲ್ಲೆಲ್ಲ ಸುಳ್ಳು ಹೇಳುವ ವ್ಯಕ್ತಿಯನ್ನು ನಾನು ನೋಡಿಲ್ಲ. ಯಡಿಯೂರಪ್ಪ ಅತ್ಯಂತ ಬೇಜವಾಬ್ದಾರಿ ವ್ಯಕ್ತಿ. ಕೇಂದ್ರ ಸಚಿವ ಅನಂತ್ ಕುಮಾರ್ ವಿದೂಷಕ ನಿದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.