ಮೈಸೂರು: ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯ, ಮಠಗಳಿಗೆ ಭೇಟಿ ನೀಡುತ್ತಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಕರಾವಳಿ ಪ್ರವಾಸ ಮಾಡಿದ್ದಾಗ ಸಾಕಷ್ಟು ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ನಿನ್ನೆ ಮೈಸೂರು ಪ್ರವಾಸದ ಆರಂಭದಲ್ಲಿಯೇ ನಾಡದೇವತೆಗೆ ಪೂಜೆ ಸಲ್ಲಿಸಿದ್ದರು. ಇದಕ್ಕೆ ಬಿಎಸ್ ವೈ ಟ್ವಿಟರ್ ನಲ್ಲಿ ಲೇವಡಿ ಮಾಡಿದ್ದಾರೆ.ರಾಹುಲ್ ಚಾಮುಂಡೇಶ್ವರಿ ದೇವತೆಯ ಸನ್ನಿಧಿಯಲ್ಲಿ ಆರತಿ ಸ್ವೀಕರಿಸುತ್ತಿರುವ ಫೋಟೋ ಹಾಕಿದ