ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿರೋ ವಿಡಿಯೋ ವೈರಲ್ ಆಗಿರೋದು ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಈ ವಿಷಯವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ವಿಡಿಯೋ ಬಿಡುಗಡೆ ಮಾಡಿರೋ ಬ್ರಹ್ಮನ ಕುರಿತು ತಿಳಿದುಕೊಳ್ಳಬೇಕಿದೆ ಅಂತ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ವಿಡಿಯೋ ಮಾಡಿದವರ ಹೆಸರನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು ಅಂತ ಜಗದೀಶ್ ಶೆಟ್ಟರ್ ಒತ್ತಾಯ ಮಾಡಿದ್ದಾರೆ. ಆಧಾರವಿಲ್ಲದೇ ವಿಡಿಯೋವನ್ನು ಕೋರ್ಟ್ ಸಾಕ್ಷಿಯಾಗಿ ತೆಗೆದುಕೊಳ್ಳುವುದಿಲ್ಲ. ವಿನಾಕಾರಣ ಆಪಾದನೆಯನ್ನು