ಪುಟ್ಟರಾಜುಗೆ ನಾಚಿಕೆ ಆಗ್ಬೇಕು ಎಂದ ಬಿಎಸ್ವೈ

ಬೆಂಗಳೂರು, ಗುರುವಾರ, 28 ಮಾರ್ಚ್ 2019 (13:21 IST)

ಐಟಿ ದಾಳಿ ಹಿನ್ನೆಲೆಯಲ್ಲಿ ಪುಟ್ಟರಾಜು ಹೇಳಿಕೆಗೆ ಗರಂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪುಟ್ಟರಾಜುಗೆ ನಾಚಿಕೆ ಆಗಬೇಕು ಅಂತ ಟೀಕೆ ಮಾಡಿದ್ದಾರೆ.

ಐಟಿ ದಾಳಿಗೆ ಸುಮಲತಾ ಅಂಬರೀಶ್  ಕಾರಣ ಎಂಬ ಹೇಳಿಕೆ ನೀಡಿದ ಪುಟ್ಟರಾಜುಗೆ ನಾಚಿಕೆ ಆಗಬೇಕು. ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುವುದರಲ್ಲಿ ಅರ್ಥವಿಲ್ಲ. ಐಟಿ ಅಧಿಕಾರಿಗಳಿಗೆ ಅನುಮಾನ ಬಂದ್ರೆ ಅವರೇ ನೇರವಾಗಿ ದಾಳಿ ಮಾಡಿ ತನಿಖೆ ಮಾಡುತ್ತಾರೆ. ಇವರು ಪ್ರಾಮಾಣಿಕರಿದ್ದರೆ ಇವರಿಗೇಕೆ ಭಯ? ನಿನ್ನೆ ಸಿಎಂ ಕುಮಾರಸ್ವಾಮಿ ಹೇಳಿದ್ದನ್ನು ಕೇಳಿದ್ದೇನೆ.

ನಿನ್ನೆ ರಾತ್ರಿಯೇ ಅವರಿಗೆ ಮಾಹಿತಿ ಇತ್ತು ಅನ್ನೋದಾದ್ರೆ ಅವರು ಮೊದಲೇ ಬಂದೋಬಸ್ತ್ ಮಾಡಿಕೊಂಡಿದ್ದಾರೆ ಅನ್ನೋ ಅನುಮಾನವಿದೆ. ಸುಖಾಸುಮ್ಮನೆ ಸಿಬಿಐ, ಐಟಿ ಮೇಲೆ ಆರೋಪ ಮಾಡೋದು ಚಾಳಿ ಆಗಿದೆ.

ಇಂದು ನಾನು, ಎಸ್.ಎಂ‌.ಕೃಷ್ಣ ಹಾಗೂ ಕೆ.ಹೆಚ್.ಶ್ರೀನಿವಾಸ್ ಶಿವಮೊಗ್ಗಕ್ಜೆ ಹೋಗುತ್ತಿದ್ದೇವೆ. ಸಂಜೆ ವಾಪಸ್ ಬರುತ್ತೇವೆ. ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗುತ್ತೇವೆ ಎಂದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೃತ್ರಿ ಸರಕಾರವೇ ಬಿಜೆಪಿ ಟಾರ್ಗೆಟ್ ಅಂತೆ...!

ರಾಜ್ಯದಲ್ಲಿರುವ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಂತ ಪ್ರಭಾವಿ ...

news

ರಾಜಕೀಯಕ್ಕೆ ಬಂದು ನಾಟಕ ಮಾಡ್ಬೇಕಿಲ್ಲ ಎಂದ ಸುಮಲತಾ

ನನ್ನ ಬಗ್ಗೆ ಒಂದೂ ದಿನವೂ ಹೇಳದೇ, ನನ್ನ ಹೆಸರು ಹೇಳದೇ ಜೆಡಿಎಸ್ ನಾಯಕರಿಗೆ ಇರಲು ಆಗುತ್ತಾನೇ ಇಲ್ಲ ಅಂತ ...

news

ಸಚಿವ ಹೆಚ್ ಡಿ ರೇವಣ್ಣ ಆಪ್ತರ ಮೇಲೂ ಐಟಿ ದಾಳಿ

ಹಾಸನ : ಸಚಿವ ಸಿಎಸ್ ಪುಟ್ಟರಾಜು ಆಪ್ತರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಇದೀಗ ...

news

ಐಟಿ ಇಲಾಖೆಯ ಮುಖ್ಯಸ್ಥ 420, ಮೋದಿಯ ಏಜೆಂಟ್- ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ರೇವಣ್ಣ

ಹಾಸನ : ಆಪ್ತರ ಮೇಲೆ ಐಟಿ ದಾಳಿ ನಡೆದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಸಚಿವ ರೇವಣ್ಣ ಐಟಿ ಇಲಾಖೆಯ ಮುಖ್ಯಸ್ಥ ...