ಬಸ್ ನಲ್ಲಿ ಆಟವಾಡುತ್ತಿದ್ದ 4 ವರ್ಷದ ಬಾಲಕಿಗೆ ಇಂತಹ ಗತಿ ತಂದ ಬಸ್ ಚಾಲಕ

ಮುಂಬೈ| pavithra| Last Modified ಬುಧವಾರ, 23 ಡಿಸೆಂಬರ್ 2020 (07:43 IST)
ಮುಂಬೈ : ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈ ಅಹಮದಾಬಾದ್ ಹೆದ್ದಾರಿಯ ವಾಲೀವ್ ಬಳಿ ನಡೆದಿದೆ.

ಬಸ್ ನಿಂತಿದ್ದ ವೇಳೆ ಬಾಲಕಿ ತನ್ನ ಸ್ನೇಹಿತರ ಜೊತೆ ಬಸ್ ನಲ್ಲಿ ಆಟವಾಡುತ್ತಿದ್ದಳು. ಬಸ್ ಒಳಗೆ ಒಬ್ಬಳೆ ಬಾಲಕಿ ಇದ್ದ ವೇಳೆ ಬಸ್ ನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ಅವಳ ಕತ್ತು ಹಿಸುಕಿ ಅವಳು ಸತ್ತಳೆಂದು ಭಾವಿಸಿ ಗೋಣಿ ಚೀಲದಲ್ಲಿ ತುಂಬಿ ಹೊರಗೆಸೆದಿದ್ದಾನೆ. ಬಾಲಕಿಗೆ ಪ್ರಜ್ಞೆ ಬಂದಾಗ ಗೋಣಿ ಚೀಲದಿಂದ ಹೊರಗೆಗೆ ಬರಲು ಪ್ರಯತ್ನಿಸಿದ್ದಾಳೆ. ಆ ವೇಳೆ ಅದನ್ನು ನೋಡಿದವರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ದಾಖಲಿಸಿಕೊಂಡ ಪೊಲೀಸರು ಸಿಸಿಟಿವೆ ದೃಶ್ಯ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :