ರಾಜ್ಯದ ಜನತೆಯು ಕಾಯುತ್ತಿದ್ದ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು, ಇದೀಗ ನಾಳೆ ರಾಜ್ಯ ಸರ್ಕಾರದ ಬಜೆಟ್ ಮಂಡಿಸಲಾಗುತ್ತದೆ. ಈ ಹಿನ್ನೆಲೆ ಸಕಲ ಸಿದ್ದತೆಗಳನ್ನು ರಾಜ್ಯ ಸರ್ಕಾರವು ಮಾಡಿಕೊಂಡಿದೆ. ಈ ವೇಳೆ ಬಜೆಟ್ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 2022ರ ಬಜೆಟ್ ಮಂಡನೆಯಲ್ಲಿ ಬರಿ ಘೋಷಣೆ, ಭರವಸೆ, ಭಾಷಣದ ಬಜೆಟ್ ಅಷ್ಟೇ ಆಗಿತ್ತು. ಡಬ್ಬಲ್ ಇಂಜಿನ್ ಸರ್ಕಾರ ಹೈ