ಸುಟ್ಟು ಕರಕಲಾದ ಬಸ್: ಮೂವರು ಸಾವು

ಬೆಂಗಳೂರು, ಮಂಗಳವಾರ, 12 ಫೆಬ್ರವರಿ 2019 (19:07 IST)

ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬಸ್ ಹೊತ್ತಿ ಉರಿದು, ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.

ಬಿಎಂಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ಗೆ ಬೆಂಕಿ ಹೊತ್ತಿ ಉರಿದ ದಾರುಣ ಘಟನೆ ಬೆಂಗಳೂರು ನಗರ ಹೊರವಲಯದ ದೇವಗೆರೆ ಬಳಿ ನಡೆದಿದೆ.

ಹಾರೋಹಳ್ಳಿಯ ಬಸವರಾಜ್ ಮಡಿವಾಳದ ಪ್ರದೀಪ್ ಹಾಗೂ ಅವಿನಾಶ್ ಮೃತ ದುರ್ದೈವಿಗಳು. ಕಗ್ಗಲೀಪುರ ಹಾಗೂ ಕುಂಬಳಗೂಡು ಮಾರ್ಗ ಮಧ್ಯದ ದೇವಗೆರೆ ಸಮೀಪದಲ್ಲಿ ಅಪಘಾತ ನಡೆದಿದ್ದು, ಬಸ್ನಲ್ಲಿದ್ದ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸವರಾಜ್, ಪ್ರದೀಪ್ ಹಾಗೂ ಅವಿನಾಶ್ ಪಲ್ಸರ್ ಬೈಕ್ನಲ್ಲಿ ಕಗ್ಗಲೀಪುರದಿಂದ ಕುಂಬಳಗೂಡು ವೇಗವಾಗಿ ಹೋಗುತ್ತಾ ಮುಂದಿದ್ದ ಲಾರಿಯನ್ನು ಹಿಂದಿಕ್ಕಲು ಮುಂದಾದಾಗ ಎದುರಿನಿಂದ ಕುಂಬಳಗೂಡು ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡು ಹೊತ್ತಿಕೊಂಡ ಬೆಂಕಿ ಬಸ್ ಎಂಜಿನ್ಗೂ ಬೆಂಕಿ ತಗುಲಿ ಸವಾರರು ಮಾರುದ್ದ ಹಾರಿಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಟಿ ಬಸ್ ನಲ್ಲಿ ಕಳ್ಳರ ಕೈಚಳಕ; ಮಹಿಳೆ ಪರೇಶಾನ್!

ಸಿಟಿ ಬಸ್ ನಲ್ಲಿ ಚಳ್ಳರು ತಮ್ಮ ಕೈಚಳಕ ತೋರಿ ಮಹಿಳೆಯೊಬ್ಬರನ್ನು ಯಾಮಾರಿಸಿದ ಘಟನೆ ನಡೆದಿದೆ.

news

ರಾಷ್ಟ್ರಪತಿ ಅಂಗಳಕ್ಕೆ ಆಡಿಯೋ ದೂರು!

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಡಿಯೋ ಬಗ್ಗೆ ರಾಷ್ಟ್ರಪತಿಗೆ ದೂರು ನೀಡಲು ಕಾಂಗ್ರೆಸ್ ...

news

ಉಳುವಿ ಚನ್ನಬಸವೇಶ್ವರ ಜಾತ್ರೆಗೆ ದೇಗುಲದ ಟ್ರಸ್ಟಿಗಳ ವಿರೋಧ!

ಉಳುವಿ ಚನ್ನಬಸವೇಶ್ವರ ಜಾತ್ರೆ ಚಾಲನೆಗೆ ದೇಗುಲದ ಟ್ರಸ್ಟಿಗಳಿಂದ ವಿರೋಧ ವ್ಯಕ್ತವಾಗಿದೆ.

news

ನನ್ನ ಜೊತೆ ಕಾಂಗ್ರೆಸ್‌ನಲ್ಲಿದ್ದವರು ಬಿಜೆಪಿಗೆ ಬರಬೇಕು ಎಂದ ಮಾಜಿ ಸಿಎಂ!

ಕಾಂಗ್ರೆಸ್ ನಲ್ಲಿ ನನ್ನ ಜತೆಯಲ್ಲಿ ಇದ್ದವರು ಈಗ ಬಿಜೆಪಿಗೆ ಬರಬೇಕು. ಹೀಗಂತ ಮಾಜಿ ಸಿಎಂ ಹೇಳಿಕೆ ...