ಯೂನಿಫಾರಂ ತೊಟ್ಟು ಶಾಸಕರೊಬ್ಬರು ಬಸ್ ನ್ನು ಚಲಾಯಿಸಿ ಗಮನ ಸೆಳೆದಿದ್ದಾರೆ. ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಿಧ ಗ್ರಾಮಗಳಿಗೆ ಬಸ್ ಸೇವೆಗೆ ಚಾಲನೆ ನೀಡಿದ್ರು. ಈ ಸಂದರ್ಭದಲ್ಲಿ ಚಾಲಕನ ಯೂನಿಫಾರಂ ತೊಟ್ಟು ಬಸ್ ನ್ನು ಚಲಾಯಿಸಿ ಗಮನ ಸೆಳೆದರು. ಈ ವೇಳೆ ಇದ್ದ ಜನರು ಹೊನ್ನಾಳಿ ಹುಲಿಗೆ ಜೈ ಅಂತ ಘೋಷಣೆ ಕೂಗಿದ್ರು. ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರೋ ಎಂ.ಪಿ.ರೇಣುಕಾಚಾರ್ಯ, ಈ ಹಿಂದೆ ಟ್ರಾಕ್ಟರ್, ಬೋಟ್ ನಡೆಸಿ ಸುದ್ದಿಯಾಗಿದ್ದರು.