ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ. ಬಸ್ ಪ್ರಯಾಣ ದರದಲ್ಲಿ ಶೇ.18ರಷ್ಟು ಏರಿಕೆ ಮಾಡಿ ಆಗಿದೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಖಡಕ್ ಆಗಿ ಹೇಳಿದ್ದಾರೆ. ಆ ಮೂಲಕ ಬಡ ಪ್ರಯಾಣಿಕರ ಜೇಬಿಗೆ ಭರ್ಜರಿ ಕತ್ತರಿ ಬಿದ್ದಂತಾಗಿದೆ.ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶೇ. 18ರಷ್ಟು ಪ್ರಯಾಣ ದರದಲ್ಲಿ ಏರಿಕೆ ಮಾಡಿ ಆಗಿದೆ. ಈಗ ಕಡಿಮೆ ಮಾಡಲು ಆಗಲ್ಲ. ಪೆಟ್ರೋಲ್ ದರ ಏರಿಕೆ