ಜವರಾಯ ಅಟ್ಟಹಾಸ ನಡೆಸಿದ್ದಾನೆ. ಕಾಲೇಜು ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಲಾರಿ ಚಾಲಕ ಹಾಗೂ ಕಾಲೇಜು ವಾಹನದ ಚಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯವಾಗಿದ್ದು, ಗಾಯಾಗಳುಗಳು ಅಥಣಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಥಣಿ ಪಟ್ಟಣದಿಂದ ವಿಜಯಪುರದ ಕಡೆಗೆ ಲಾರಿ ಹೊರಟಿತ್ತು. ಗ್ರಾಮೀಣ ಭಾಗದಿಂದ ಅಥಣಿ ಪಟ್ಟಣಕ್ಕೆ ವಿದ್ಯಾರ್ಥಿಗಳನ್ನು ಹೊತ್ತು ಬಸ್ ಸಾಗ್ತಿತ್ತು.