ಸೋರುತ್ತಿರೋ ಬಸ್ : ಹಿಗ್ಗಾಮುಗ್ಗಾ ಉಗಿಯುತ್ತಿರೋ ಪ್ರಯಾಣಿಕರು

ಹುಬ್ಬಳ್ಳಿ, ಗುರುವಾರ, 10 ಅಕ್ಟೋಬರ್ 2019 (13:00 IST)

ಸಾರಿಗೆ ಇಲಾಖೆಯ ಬಸ್ ಮಳೆ ನೀರಿಗೆ ಸೋರುತ್ತಿದ್ದು, ಅವುಗಳಲ್ಲೇ ಪ್ರಯಾಣಿಸುತ್ತಿರುವ ಜನರು ಕ್ಯಾಕರಿಸಿ ಉಗಿಯುತ್ತಿದ್ದಾರೆ.


ಧಾರವಾಡ ಜಿಲ್ಲೆಯಲ್ಲಿ ಮತ್ತೆ ಕಳೆದ ಮೂರು ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಜನರು ಮಳೆಗೆ ತತ್ತರಿಸಿ ಹೋಗಿದ್ದಾರೆ.

ಈ ಬಾರಿ ಮನೆ, ಮಠಗಳು ಅಷ್ಟೇ ಅಲ್ಲದೇ ಸಾರಿಗೆಯ ಬಸ್ಸು ಕೂಡಾ ಸೋರಲು ಆರಂಭಿಸಿದೆ. ಜನರು ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿಯಿಂದ ಗುಡೇನಕಟ್ಟಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ಸು ಮಳೆಯಿಂದ ಸೋರುತ್ತಿದ್ದು, ಮೊದಲೇ ಅರ್ಧದಷ್ಟು ಹಾಳಾದ ಬಸ್ಸು ಇದೀಗ ಮಳೆಯಿಂದಾಗಿ ಎಲ್ಲೆಂದರಲ್ಲಿ ಸೋರುತ್ತಿದೆ‌. ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಎಲ್ಲೆಂದರಲ್ಲಿ ತುತಾದ ಬಸ್ಸಿನ ಮೇಲ್ಛಾವಣಿಯಿಂದ ಮಳೆಯ ಹನಿಗಳು ಸೋರುತ್ತಿವೆ.  ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಅಲ್ಲದೇ ಈ ಹಿಂದೆಯೇ ಬಸ್ಸಿನ ಸ್ಥಿತಿಯ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ. ಆದರೆ ಅದನ್ನು ಲೆಕ್ಕಿಸದೇ ಮತ್ತೆ ಹಳೆಯ ಬಸ್ಸುಗಳನ್ನು ಸಂಚರಿಸಲು ಬಿಡುತ್ತಾರೆ. ಇದೀಗ ಮಳೆಗಾಲ ಬೇರೆ. ಇಂತಹ ಸಂದರ್ಭಗಳಲ್ಲಿ ಈ ಬಸ್ಸಿನಲ್ಲಿ  ಪ್ರಯಾಣಿಸುವುದೇ ದುಸ್ಥರವಾಗಿ ಬಿಟ್ಟಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ಪ್ರಾಣಿ ಕಂಡರೆ ಬೆಚ್ಚಿ ಬೀಳ್ತಿದ್ದಾರೆ ಜನರು

ಬೈಕ್ ಸವಾರರು ಹಾಗೂ ಪಾದಚಾರಿಗಳು ಈ ಪ್ರಾಣಿಗಳನ್ನು ಕಂಡರೆ ಬೆಚ್ಚಿ ಬೀಳ್ತಿದ್ದಾರೆ.

news

ಚರ್ಚ್, ಮಸೀದಿ, ದೇವಸ್ಥಾನ ಒಟ್ಟಾಗಿ ಬೆಂಬಲಿಸಿದ್ದು ಯಾರನ್ನು?

ಆ ಹೋರಾಟಕ್ಕೆ ಚರ್ಚ್ ನ ಸಿಬ್ಬಂದಿ, ಮಸೀದಿಯ ಬಂಧುಗಳು ಅಲ್ಲದೇ ದೇವಸ್ಥಾನದ ಸಮಿತಿಯವರು ಸಾಥ್ ನೀಡಿ ...

news

ಸಿದ್ಧಾರೂಢ ಮಠದ ಟ್ರಸ್ಟಿಯ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ ನಾಲ್ವರು ಅಂದರ್

ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿರುವ ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟಿಗಳದ್ದು ಎನ್ನಲಾದ ಅಂಥ ವಿಡಿಯೋ ...

news

ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ತಿರುಗೇಟು

ಬೆಂಗಳೂರು : ಡಾ. ಜಿ ಪರಮೇಶ್ವರ್ ನಿವಾಸ, ಕಾಲೇಜು ಮೇಲೆ ಐಟಿ ದಾಳಿ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ...