ಕೊರೊನಾ ಸಂಕಷ್ಟದ ಸಮಯದಲ್ಲೂ ಸಾವಿರ ಕ್ವಿಂಟಾಲ್ ಬಾಳೆಕಾಯಿ ಖರೀದಿ ಮಾಡಲಾಗಿದೆ. ಈ ಮೂಲಕ ಉತ್ತರಕನ್ನಡ ಜಿಲ್ಲೆ ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘವು ರೈತರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಲಾಕ್ಡೌನ್ ಘೋಷಿಸಲಾಗಿತ್ತು. ಪರಿಣಾಮ ಬೆಳೆದ ಬಾಳೆಕಾಯಿಯನ್ನು ಎಲ್ಲೂ ಮಾರಾಟ ಮಾಡಲು ಸಾಧ್ಯವಾಗದೇ ರೈತರು ಅತಂತ್ರರಾಗಿದ್ದರು. ಬಾಳೆಕಾಯಿ ಬೆಳೆದ ರೈತರು ತೀವ್ರ ನಷ್ಟ ಹೊಂದಿ ಸಂಕಷ್ಟಕ್ಕೊಳಗಾಗಿದ್ದರು. ಈ ಸಮಯದಲ್ಲಿ ರೈತರ ನೆರವಿಗೆ ಮುಂದಾದ