ಮೈಸೂರು: ವರುಣಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಇಂದು ಗೊಂದಲಕ್ಕೆ ತೆರೆ ಬೀಳುವ ನಿರೀಕ್ಷೆಯಿದೆ.ಈ ನಡುವೆ ಬಿವೈ ವಿಜಯೇಂದ್ರ ನಿನ್ನೆ ಮಧ್ಯಾಹ್ನ ನಂಜನಗೂಡಿನಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಟಿಕೆಟ್ ಗೊಂದಲ ಬಗೆ ಹರಿಯುವವರೆಗೂ ಅಜ್ಞಾತ ವಾಸ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತರ ಕೈಗೂ ಸಿಗದಿರಲು ಅವರು ನಿರ್ಧರಿಸಿದ್ದಾರೆ.ಈ ನಡುವೆ ಬಿಎಸ್ ವೈ ಕುಟುಂಬ ವರ್ಗದವರು ಬಿವೈ ವಿಜಯೇಂದ್ರಗೆ ಟಿಕೆಟ್ ಸಿಗಲೆಂದು ದೇವರ