ಬೈ ಎಲೆಕ್ಷನ್: ಕೈ ಅಭ್ಯರ್ಥಿ ಟೆಂಪಲ್ ರನ್

ಕಲಬುರಗಿ, ಬುಧವಾರ, 1 ಮೇ 2019 (18:41 IST)

ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ  ಸುಭಾಷ್ ರಾಠೋಡ್ ಟೆಂಪಲ್ ರನ್ ಮಾಡುತ್ತಿದ್ದಾರೆ.

ಬಂಜಾರಾ ಸಮುದಾಯದ ಮತಬೇಟೆಗಾಗಿ ಡಾ.ರಾಮರಾವ್ ಮಹಾರಾಜರ ಮೊರೆ ಹೋಗಿದ್ದಾರೆ ರಾಠೋಡ್. ಮಹಾರಾಷ್ಟ್ರದ ಪೌರಾದೇವಿ ಪೀಠದ ಡಾ.ರಾಮರಾವ್ ಮಹಾರಾಜರನ್ನು ಭೇಟಿ ಮಾಡಿದ್ದಾರೆ. ಬಂಜಾರಾ ಸಮುದಾಯದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಡಾ.ರಾಮರಾವ್ ಮಹಾರಾಜರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇಂದು ಬೆಳಗ್ಗೆ 7.30ರ ಸುಮಾರಿಗೆ ರಾಮರಾವ್ ಮಹಾರಾಜರ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ ಸುಭಾಷ್ ರಾಠೋಡ್. ಚಿಂಚೋಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರಾ ಸಮುದಾಯ ಮತದಾರರಿರುವ ಹಿನ್ನೆಲೆ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಸುಭಾಷ್ ರಾಠೋಡ್. ರಾಠೋಡ್ ಗೆಲುವಿಗೆ ಕೈ ಪಡೆ ಸನ್ನದ್ಧವಾಗಿ ಕಾರ್ಯತಂತ್ರ ರೂಪಿಸುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ರಾಮಯ್ಯ ಕರೆದ್ರೂ ಬಿಜೆಪಿ ಬಿಡೋಲ್ಲ ಎಂದು ಶಾಕ್ ನೀಡಿದ ಶಾಸಕ

ನಾನು ಕಾಂಗ್ರೆಸ್ ಸೇರುವ ಕುರಿತು ಹರಿದಾಡುತ್ತಿರುವ ಆಡಿಯೋ ಸುಳ್ಳು.ನಾನು ಬಿಜೆಪಿ ಕಾರ್ಯಕರ್ತ.ಯಡಿಯೂರಪ್ಪ ...

news

ವಿಡಿಯೋದಲ್ಲಿ ಬೆತ್ತಲಾದ ಟ್ರಾಫಿಕ್ ಪೊಲೀಸರ ಕರ್ಮಕಾಂಡ

ಟ್ರಾಫಿಕ್ ಪೊಲೀಸರ ಕರ್ಮಕಾಂಡ ಮತ್ತೆ ಬಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

news

ರಾಜ್ಯದ ಗಡಿ ಜಿಲ್ಲೆ ಅಕ್ಷರಶಃ ನಡುಗಿದೆ; ಕಾರಣ?

ರಾಜ್ಯದ ಗಡಿ ಜಿಲ್ಲೆಯೊಂದು ಅಕ್ಷರಶಃ ನಡುಗಿದ್ದು ಅಪಾರ ನಷ್ಟಕ್ಕೆ ಒಳಗಾಗಿದೆ.

news

ಜೆಡಿಎಸ್ ಕಾರ್ಯಕರ್ತರ ಮೇಲೆ ಅನುಮಾನ ವ್ಯಕ್ತಪಡಿಸಿದ ಸಚಿವ ಜಿ.ಟಿ. ದೇವೇಗೌಡ

ಮೈಸೂರು : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೆಲವೆಡೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ...