ರಾಮನಗರ : ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಮತ್ತೆ ಪುನಃ ಕಾಂಗ್ರೆಸ್ ಗೆ ಸೇರ್ಪಡೆಯಾದ ತಮ್ಮ ಮಗ ಚಂದ್ರಶೇಖರ್ ವಿರುದ್ಧ ಸಿ.ಎಂ.ಲಿಂಗಪ್ಪ ಕಿಡಿಕಾರಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗ ಚಂದ್ರಶೇಖರ್ ಮೊದಲು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದೇ ದೊಡ್ಡ ತಪ್ಪು, ಅಂಥದ್ದರಲ್ಲಿ ಬಿ ಫಾರಂ ತೆಗೆದುಕೊಂಡು, ಚುನಾವಣೆಗೆ ನಿಂತು ಶಾಸಕನಾಗುತ್ತೀನಿ ಅಂದುಕೊಳ್ಳುವಷ್ಟರಲ್ಲಿ ಹಿಂದೆ ಸರಿಯುವುದು ಸುಲಭವಲ್ಲ ಎಂದು ಹೇಳಿದ್ದಾರೆ. ನನ್ನ ಮಗ ಎಲ್ಲಿದ್ದಾನೆ, ಹೇಗಿದ್ದಾನೆ