ಇಡಿ ವಶದಲ್ಲಿರೋ ಮಾಜಿ ಸಚಿವ ಹಾಗೂ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಚಿವರೊಬ್ಬರು ಟಾಂಗ್ ನೀಡಿದ್ದಾರೆ. ಡಿಕೆಶಿ ಅವರ ಸಹವಾಸ ಮಾಡಿದ್ದರಿಂದಲೇ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ನೋಟಿಸ್ ಬಂದಿದೆ. ಸಹವಾಸ ದೋಷದಿಂದಾಗಿ ಸನ್ಯಾಸಿ ಕೆಟ್ಟ ಎಂಬ ಮಾತಿನಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಿತಿ ಆಗಿದೆ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.ಡಿಕೆಶಿ ಜೊತೆಗೆ ವ್ಯವಹಾರ ನಂಟು ಇಟ್ಟುಕೊಂಡ ಕಾರಣಕ್ಕಾಗಿಯೇ ಹೆಬ್ಬಾಳ್ಕರ್ ಗೆ ವಿಚಾರಣೆಗೆ ಹಾಜರಾಗುವಂತೆ