ಬೆಂಗಳೂರು : ಬಾಗಲಕೋಟೆ ಜಿಲ್ಲೆ ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಘಟಪ್ರಭಾ ಯೋಜನೆಯಡಿ 411.10 ಕೋಟಿ ರೂ. ಮೊತ್ತದ ಅನವಾಲ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.ಘಟಪ್ರಭಾ ಯೋಜನೆಯಡಿ, ಅನವಾಲ ಏತ ನೀರಾವರಿಯಲ್ಲಿ 3.64 ಟಿಎಂಸಿ ನೀರಿನ ಅವಶ್ಯಕತೆಯಾಗಿದ್ದು, ಇದರ ಅನುಷ್ಠಾನದಿಂದ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ