ಸಚಿವ ಸಂಪುಟ ಉಪ ಸಮಿತಿಯ ನಡೆಗೆ ಸಚಿವರೊಬ್ಬರು ಅಸಮಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಬೆಳೆಗಳ ಪರಿಶೀಲನೆಯನ್ನು ಕೃಷಿ ಸಚಿವರ ಅಧ್ಯಕ್ಷತೆಯ ಬರ ಪರಿಶೀಲನಾ ಸಮಿತಿ ನಡೆಸಿತು.ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ನೇತೃತ್ವದ ತಂಡದ ಸದಸ್ಯರು, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗಂಭೀರನಹಳ್ಳಿಗೆ ಭೇಟಿ ನೀಡಿದರು. ಅಲ್ಲಿ ನಷ್ಟಕ್ಕೀಡಾಗಿರುವ ತೊಗರಿ ಹಾಗೂ ಅವರೆ ಬೆಳೆ ಪರಿಶೀಲನೆ ನಡೆಸಿದರು.ಆಗ ಸಚಿವರನ್ನು ಬಿಸಿಲಲ್ಲೆ ನಿಲ್ಲಿಸಿ ರೈತರಿಂದ ಸಮಸ್ಯೆಗಳ ಅನಾವರಣ ನಡೆಯಿತು.