ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಮಾತ್ರ ಬಾಕಿ ಉಳಿದಿರುವಾಗ ಸಚಿವ ಸಂಪುಟ ವಿಸ್ತರಣೆ ಕಾಲ ಕೂಡಿಬಂದಂತಿದೆ. ಹೈಕಮಾಂಡ್ ಭೇಟಿ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಳೆದ ಬಾರಿ ವಿಧಾನಪರಿಷತ್ ನಾಮಿನೆಶನ್ ಸಂದರ್ಭ ದೆಹಲಿಗೆ ಹೋಗಿದ್ದಾಗ ರಾಹುಲ್ ಗಾಂಧಿ ಇರಲಿಲ್ಲ. ಇದೀಗ, ಹೈಕಮಾಂಡ್ ಭೇಟಿಗೆ ಅವಕಾಶ ಕೋರಿದ್ದು, ಹೈಕಮಾಂಡ್ ಭೇಟಿ ಬಳಿಕ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಸಂಪುಟ ವಿಸ್ತರಣೆ ಮೂಲಕ ಖಾಲಿ ಇರುವ ಮೂರು ಸ್ಥಾನಗಳನ್ನ ತುಂಬಲಾಗುತ್ತಿದೆಯಷ್ಟೇ