ಚಾಮರಾಜನಗರ: ಅಂಗರಕ್ಷಕರಿಲ್ಲದೇ ಕ್ಯಾಬಿನೇಟ್ ಮಂತ್ರಿಯೊಬ್ಬರು ವಾಕಿಂಗ್ ಮಾಡಿದ್ದಾರೆ. ನಸುಕಿನ ಜಾವ ನಾಲ್ಕುವರೆಯಿಂದ ಆರು ಗಂಟೆವರೆಗೆ ಏಕಾಂಗಿಯಾಗಿ ರಸ್ತೆಯಲ್ಲಿ ವಾಕ್ ಮಾಡಿದ ಸಚಿವರನ್ನು ಕಂಡು ಸಾರ್ವಜನಿಕರು ಗಲಿಬಿಲಿಗೊಂಡರು. ಏಕೆಂದರೆ ಪೊಲೀಸರ ಭದ್ರತೆಯಿಲ್ಲದೇ ಕ್ಯಾಬಿನೆಟ್ ದರ್ಜೆ ಸಚಿವರು ವಾಕಿಂಗ್ ಮಾಡಿದ್ದಾರೆ. ಸಚಿವರ ಸರಳತೆಯನ್ನು ಪೊಲೀಸರು ದುರುಪಯೋಗ ಪಡಿಸಿಕೊಂಡರಾ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಯಿತು. ಅಂದಹಾಗೆ ಅಂಗರಕ್ಷಕರಿಲ್ಲದೇ ವಾಕಿಂಗ್ ಮಾಡಿದವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ. ಎರಡು ದಿನಗಳಿಂದ ತಮ್ಮ ಸ್ವಗ್ರಾಮ ಉಪ್ಪಿನಮೋಳೆಯ