ಮಂಗಳೂರು : ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ಅಭಿಯಾನ ಶುರುಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿ ಅಭಿಯಾನ ಪ್ರಾರಂಭಿಸಿದ್ದು, ಬಿಜೆಪಿಯವರಿಂದ ಪೋಸ್ಟ್ ಕಾರ್ಡ್ ಮತ್ತು ಸಹಿ ಸಂಗ್ರಹ ಮಾಡಲಾಗುತ್ತಿದೆ. ಮಂಗಳೂರಿನ ಸುರತ್ಕಲ್ ವೃತ್ತದಲ್ಲಿ ಸಹಿ ಸಂಗ್ರಹ ಮಾಡಲಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಳಿನ್ ಕುಮಾರ್ ಕಟೀಲ್ ಸಹಿ ಹಾಕಿ ಬಳಿಕ ಪೋಸ್ಟ್ ಕಾರ್ಡ್ ಗೆ ಸಹಿ ಹಾಕಿ ಪ್ರಧಾನಿ ಮೋದಿಗೆ ಬೆಂಬಲ ಸೂಚಿಸಿದ್ದಾರೆ.