ಪಾಸಿಟಿವಿ ದರ ಇಳಿಕೆಯಾಗದೇ ಅನ್ ಲಾಕ್ ಇಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು| Krishnaveni K| Last Modified ಶನಿವಾರ, 5 ಜೂನ್ 2021 (09:14 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವುದು ಸಮಾಧಾನಕರ ವಿಚಾರ. ಈ ನಡುವೆ ಪಾಸಿಟಿವಿ ದರ ಕಡಿಮೆಯಾಗದೇ ಅನ್ ಲಾಕ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

 
ನಿನ್ನೆ ರಾಜ್ಯದಲ್ಲಿ 16,068 ಪ್ರಕರಣಗಳು ದಾಖಲಾಗಿದ್ದವು. ಪಾಸಿಟಿವಿ ದರ ಶೇ.10 ಕ್ಕೆ ಇಳಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಶೇ.5 ರ ಆಸುಪಾಸು ಪಾಸಿಟಿವಿ ದರವಿದೆ.
 
ಇಡೀ ರಾಜ್ಯದಲ್ಲಿ ಪಾಸಿಟಿವಿ ದರ ಶೇ.5 ಕ್ಕೆ ಇಳಿಕೆಯಾಗದೇ ಲಾಕ್ ಡೌನ್ ಮುಕ್ತಗೊಳಿಸಲಾಗದು. ಇದಕ್ಕಾಗಿ ಎಲ್ಲಾ ಜಿಲ್ಲಾಡಳಿತಗಳು ಶ್ರಮಿಸಬೇಕು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :