Widgets Magazine

ಕೊರೋನಾ ಭೀತಿ : ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ದೇವರ ದರ್ಶನ ರದ್ದು

ಕಲಬುರಗಿ| Jagadeesh| Last Modified ಶುಕ್ರವಾರ, 20 ಮಾರ್ಚ್ 2020 (20:10 IST)
ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ ಪ್ರಖ್ಯಾತ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ದೇವರ ದರ್ಶನ ರದ್ದುಗೊಳಿಸಲಾಗಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆಯುವ ಸಭೆ, ಸಮಾರಂಭ ಹಾಗೂ ಮತ್ತಿತರ ಜನಸಂದಣಿ ಸೇರುವ ಕಾರ್ಯಕ್ರಮಗಳ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಅಫಜಲಪುರ ತಾಲೂಕಿನ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಜೊತೆಗೆ ಭಕ್ತಾಧಿಗಳು ಸ್ವಯಂ ಆಗಿ ದೇವರ ದರ್ಶನಕ್ಕೆ ಬರುವುದು, ಪೂಜಾ ಸೇವೆಗಳನ್ನು, ನಿತ್ಯ ಅನ್ನಸಂತರ್ಪಣೆ ಹಾಗೂ ದೇವರ ದರ್ಶನ ಸೇರಿದಂತೆ ಉಳಿದ ಎಲ್ಲ ಸೇವೆಗಳನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ. ಈ ದೇವಸ್ಥಾನದಲ್ಲಿ ರಾಜ್ಯ ಮತ್ತು ನೆರೆ ರಾಜ್ಯದಿಂದ ಬರುವ  ಭಕ್ತಾಧಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇವಸ್ಥಾನದ ವಸತಿ ಕೋಣೆ ಮತ್ತು ಯಾತ್ರಿ ನಿವಾಸದ ಕೋಣೆಯಲ್ಲಿ ಹಾಗೂ ದೇವಾಲಯದ ಇನ್ನುಳಿದ ತೆರೆದ ಪ್ರದೇಶದಲ್ಲಿಯೂ ತಂಗುವುದನ್ನು ಸಹ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :