3,500 ಉದ್ಯೋಗಿಗಳ ವಜಾ ಬಳಿಕ, ಟ್ವಿಟರ್ ಸಿಬ್ಬಂದಿಗೆ ಮೊದಲ ಇ-ಮೇಲ್ ಅನ್ನು ಆ ಕಂಪನಿಯ ಒಡೆಯ ಎಲಾನ್ ಮಸ್ಕ್ ಕಳಿಸಿದ್ದಾರೆ. ವರ್ಕ್ ಫ್ರಮ್ ಹೋಮ್ ಪದ್ಧತಿ ಇನ್ನು ಮುಂದೆ ಇರುವುದಿಲ್ಲ. ಉದ್ಯೋಗಿಯು ಕಚೇರಿಯಲ್ಲಿ ವಾರಕ್ಕೆ 40 ಗಂಟೆ ಇರಬೇಕು ಎನ್ನುವ ಸೂಚನೆಯನ್ನು ನೀಡಿದ್ದಾರೆ. ಭವಿಷ್ಯದ ದಿನಗಳಲ್ಲಿ ಕಷ್ಟದ ಸಂದರ್ಭಗಳು ಇರಲಿವೆ, ಎದುರಿಸಲು ಎಲ್ಲರೂ ಸಜ್ಜಾಗಿ ಎಂದು ತಡರಾತ್ರಿ ಉದ್ಯೋಗಿಗಳಿಗೆ ಕಳಿಸಿದ ಇ-ಮೇಲ್ನಲ್ಲಿ ಎಲಾನ್ ಮಸ್ಕ್ ಹೇಳಿದ್ದಾರೆ. ಟೆಸ್ಲಾ ಕಂಪನಿಯ ಮಾಲೀಕರಾದ