ಚಿತ್ರದುರ್ಗ: ಚಿತ್ರದುರ್ಗದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಕಾರಿನ ಟಯರ್ ಸಿಡಿದು ಇಬ್ಬರು ಮಕ್ಕಳು ಸೇರಿ ಐವರು ಸಾವಿಗೀಡಾಗಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಿಂದ ಚಿತ್ರದುರ್ಗ ಕಡೆ ಬರುತ್ತಿದ್ದ ಎರ್ಟಿಗಾ ಕಾರಿನ ಟಯರ್ ಸಿಡಿದು ಐದುಮಂದಿ ಸಾವಿಗೀಡಾಗಿದ್ದಾರೆ. ಹಿರಿಯೂರು ತಾಲೂಕು ಮೇಟಿಕುರ್ಕೆ ಗ್ರಾಮದ ಬಳಿ ಈ ಭೀಕರ ಘಟನೆ ಸಂಭವಿಸಿದೆ. ಎರ್ಟಿಗಾ ಕಾರಿನ ಟಯರ್ ಸ್ಫೋಟಗೊಂಡು ಸ್ಕಾರ್ಪಿಯಾಗೆ ಡಿಕ್ಕಿ ಹೊಡೆದಿದೆ. ಮೃತರು ಚಿತ್ರದುರ್ಗ ಮತ್ತು ಬೆಂಗಳೂರು ಮೂಲದವರು. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ