ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಕಾರ್ ಬೆಸ್ಕಾಂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ರಭಸಕ್ಕೆ ಬೆಸ್ಕಾಂ ಕಂಬ ಮತ್ತು ವಾಹನ ಜಖಂಗೊಂಡಿದೆ. ದಾವಣಗೆರೆ ನಿಜಲಿಂಗಪ್ಪ ಬಡಾವಣೆ 2 ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ.ಅಪ್ರಾಪ್ತ ವಯಸ್ಸಿನ ಹುಡುಗರು ವಾಹನ ಚಲಾಯಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಬಡಾವಣೆ ಮನೆಗಳ ವಿದ್ಯುತ್ ಸಂಪರ್ಕ ಕಟ್ ಆಗಿದೆ.ಮಹೀಂದ್ರಾ ಎಸ್ ಯು ವಿ ಕಾರ್ ಅಪಘಾತವಾಗಿದೆ.