ಅತೀ ವೇಗವಾಗಿ ಬಂದ ಕಾರು ಗುದ್ದಿದ್ದರಿಂದ ವ್ಯಕ್ತಿಯೊಬ್ಬರು ಮೇಲ್ಸೆತುವೆ ಮೇಲಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟರೆ, 5ನೇ ತರಗತಿ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. 44 ವರ್ಷದ ಗೋವಿಂದಪ್ಪ ಮೃತಪಟ್ಟಿದ್ದರೆ, ಚಿಕ್ಕಪ್ಪನ ಮಗ 12 ವರ್ಷದ ಬಾಲಕ ಸಂಜಯ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ತೋರಿಸ್ತೀನಿ ಅಂತ ದೊಡ್ಡಪ್ಪ, ತಮ್ಮನ ಮಗನನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಜಕ್ಕೂರು ಏರೋಡ್ರೋಮ್ ಬಳಿಯ ಮೇಲ್ಸೆತುವೆ ಮೇಲೆ ಬದಿಯಲ್ಲಿ