ಉಡುಪಿ : ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಘೋಷಿಸಿದ್ದಾರೆ. ಮುತಾಲಿಕ್ ಅವರ ಅಫಿಡವಿಟ್ನಲ್ಲಿ ಕಾಸಿಗಿಂತ ಕೇಸೇ ಜಾಸ್ತಿಯಿರುವ ಮಾಹಿತಿ ಬಹಿರಂಗಗೊಂಡಿದೆ. ಪ್ರಮೋದ್ ಮತಾಲಿಕ್ ಬಳಿ ಸ್ಥಿರಾಸ್ತಿ, ವಾಹನ, ಸಾಲ ಇಲ್ಲ. ಮುತಾಲಿಕ್ ಕೈಯಲ್ಲಿ 10,500 ರೂ. ನಗದು, ಎರಡು ಬ್ಯಾಂಕುಗಳಲ್ಲಿ 2,63,500 ರೂ. ಇದೆ ಎಂದು ಘೋಷಿಸಿಕೊಂಡಿದ್ದಾರೆ. ರಾಜ್ಯದ 7 ಠಾಣೆಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ಕೇಸು