ಮಡಿಕೇರಿ: ಕನ್ನಡ ನಾಡಿನ ಜೀವನದಿ ತಲಕಾವೇರಿಯಲ್ಲಿ ಇಂದು 12.33ಕ್ಕೆ ಪವಿತ್ರ ತೀರ್ಥೋದ್ಭವವಾಯಿತು. ರಾಜ್ಯದ ನಾನಾ ಭಾಗದಿಂದ ಬಂದ ಜನ ಈ ಸಂಭ್ರಕ್ಕೆ ಸಾಕ್ಷಿಯಾದರು. ಈ ಬಾರಿ ಮಧ್ಯಾಹ್ನದ ವೇಳೆಯೇ ತೀರ್ಥೋದ್ಭವವಾದ್ದರಿಂದ ಅನೇಕ ಯಾತ್ರಾರ್ಥಿಗಳು ಬೆಳಗ್ಗೆಯೇ ತಲಕಾವೇರಿಗೆ ಆಗಮಿಸಿದರು. ತಲಕಾವೇರಿಯಿಂದ 10 ಕಿ.ಮೀ. ದೂರದಲ್ಲಿರುವ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಭಕ್ತರು ಪಿಂಡ ಪ್ರಧಾನ ಮತ್ತು ತಲೆ ಮುಡಿ ಹರಕೆ ಸಲ್ಲಿಸಿ ಪುಣ್ಯಸ್ನಾನ ಮಾಡಿದರು.ರಾಜ್ಯ ಮಾತ್ರವಲ್ಲದೆ ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳಿಂದ ಅನೇಕ