ಎಡಿಜಿಪಿ ಅಲೋಕ್ ಕುಮಾರ್ ಗೆ ಸಿಬಿಐ ಡ್ರಿಲ್

ಬೆಂಗಳೂರು| Jagadeesh| Last Modified ಗುರುವಾರ, 26 ಸೆಪ್ಟಂಬರ್ 2019 (13:23 IST)
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗೆ ಸಿಬಿಐ ಡ್ರಿಲ್ ಶುರುವಾಗಿದೆ.

ಎಡಿಜಿಪಿ ಕೆಎಸ್‌ಆರ್‌ಪಿ ಅಲೋಕ್ ಕುಮಾರ್ ರನ್ನು ಸಿಬಿಐ ಅಧಿಕಾರಿಗಳು ತನಿಖೆ ಹಾಗೂ ವಿಚಾರಣೆಗೆ ಒಳಪಡಿಸಿದ್ದಾರೆ.

ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಹಗರಣ ಭಾರೀ ಸದ್ದು ಮಾಡಿತ್ತು. ಮೈತ್ರಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಈಗ ಮರು ಜೀವ ಬಂದಿದೆ.

ಸಿಬಿಐ ಅಧಿಕಾರಿಗಳು ನಸುಕಿನ ವೇಳೆಯಲ್ಲೇ ಅಲೋಕ್ ಕುಮಾರ್ ನಿವಾಸಕ್ಕೆ ಆಗಮಿಸಿ ಶಾಕ್ ನೀಡಿದ್ದಾರೆ. ಫೋನ್ ಕದ್ದಾಲಿಕೆ ಕುರಿತು ಸಿಬಿಐ ಅಧಿಕಾರಿಗಳು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.  


ಇದರಲ್ಲಿ ಇನ್ನಷ್ಟು ಓದಿ :