CBIಗೆ ಮಾಡಲು ದೊಡ್ಡ ದೊಡ್ಡ ಕೆಲಸಗಳು ಇರುತ್ತವೆ. ಅವುಗಳನ್ನು ಮೊದಲು ಮಾಡುವಂತೆ ತಾನು ಸಿಬಿಐಗೆ ಸಲಹೆ ನೀಡುವುದಾಗಿ ಶಿವಮೊಗ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಸಚಿವರು, ತನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿರುವ ವಿಚಾರ ಪ್ರಸ್ತಾಪಿಸುತ್ತಾ ಈ ಮೇಲಿನ ಮಾತುಗಳನ್ನು ಹೇಳಿದರು. ನನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿದೆ. ಆಕೆಯ ಶಿಕ್ಷಣ ಶುಲ್ಕದ ಬಗ್ಗೆ ಅವರಿಗೆ ಮಾಹಿತಿ ಬೇಕಂತೆ. ಈ CBIನವರಿಗೆ