ಬೆಂಗಳೂರು : ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಸಿಬಿಯ ಒಸಿಡಬ್ಲ್ಯು ವಿಂಗ್ ನ ಇನ್ಸ್ ಪೆಕ್ಟರ್ ಹಾಗೂ ಮುಖ್ಯ ಪೇದೆಯನ್ನು ಅಮಾನತು ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. AIMMS ಚಿಟ್ ಫಂಡ್ ಕಂಪೆನಿಯಿಂದ ಜನರಿಗೆ ಮೋಸವಾದ ಹಿನ್ನಲೆಯಲ್ಲಿ ಸಿಸಿಬಿಯ ಒಸಿಡಬ್ಲ್ಯು ವಿಂಗ್ ನ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಮುಖ್ಯ ಪೇದೆ ಸತೀಶ್ ವಿಚಾರಣೆ ನೆಪದಲ್ಲಿ AIMMS ಚಿಟ್ ಫಂಡ್ ಕಂಪೆನಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.