ಬಳ್ಳಾರಿ: ಆಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಮಾಡಲು 57 ಕೆಜಿ ಚಿನ್ನ ಪಡೆದಿದ್ದಾರೆಂಬ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಇನ್ನೂ ಪತ್ತೆಯಾಗಿಲ್ಲ.ಈ ನಡುವೆ ಅವರು ಲಂಚದ ರೂಪದಲ್ಲಿ ಪಡೆದಿದ್ದ 57 ಕೆಜಿ ಚಿನ್ನಕ್ಕಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಸಿರಗುಪ್ಪದ ಅವರ ನಿವಾಸದಲ್ಲಿ ತೀವ್ರ ತಪಾಸಣೆ ನಡೆಸಿದ್ದ ಸಿಸಿಬಿ ಪೊಲೀಸರ ತಂಡ ರೆಡ್ಡಿಗೆ ಸೇರಿದ ಇತರ ನಿವಾಸಗಳಲ್ಲೂ ತಪಾಸೆಣೆ ನಡೆಸುತ್ತಿದೆ.ಹಾಗಿದ್ದರೂ ಇದುವರೆಗೆ ಚಿನ್ನದ ಬಗ್ಗೆ