ಸಿಸಿಟಿವಿ ಜಖಂಗೊಳಿಸಿದ್ರು; ಸರಣಿ ಕಳ್ಳತನ ಮಾಡಿದ್ರು

ಗದಗ, ಭಾನುವಾರ, 12 ಆಗಸ್ಟ್ 2018 (15:20 IST)

ಸಿಸಿ ಟಿವಿ ಜಖಂಗೊಳಿಸಿ ಅಂಗಡಿಗಳ ಬಾಗಿಲು ಮುರಿದು ಮಾಡಿರುವ ಘಟನೆ ನಡೆದಿದೆ.  ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಕಳ್ಳತನ ಘಟನೆ ನಡೆದಿದೆ. ಪಟ್ಟಣದ ಗದಗ ರಸ್ತೆಯ ಮೂರು ಅಂಗಡಿಗಳಲ್ಲಿ  ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಸಿಸಿ ಕ್ಯಾಮರಾ ಒಡೆದು ಖದೀಮರು ಕಳ್ಳತನಕ್ಕೆ ಮುಂದಾಗಿದ್ದಾರೆ.

ಪಟ್ಟಣದ ಗದಗ ರಸ್ತೆಯಲ್ಲಿರುವ ಆರ್.ಹೆಚ್.ಬೆಂಗಲ್ಸ್ ಅಂಗಡಿ ಹಾಗೂ ಪ್ರಶಾಂತ ಟಾಯರ್ಸ ಮತ್ತು ಪಂಚರ್ ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳರ ತಂಡ ಆರ್.ಹೆಚ್ .ಬೆಂಗಲ್ಸ್ ಅಂಗಡಿ ಮುಂದಿನ ಸಿಸಿ ಟಿವಿಯನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ. ಇನ್ನು ವಾರದ ಹಿಂದಷ್ಟೇ ಪಟ್ಟಣದ ರೋಣ ಹಾಗೂ ಜೋಡು ರಸ್ತೆಯಲ್ಲಿ ಸರಣಿ ಕಳ್ಳತನ ಸೇರಿದಂತೆ ಒಟ್ಟು ಎರೆಡು ಬಾರಿ ಕಳ್ಳತನವಾಗಿದ್ದವು.

ಇದೀಗ ದುಷ್ಕರ್ಮಿಗಳು ಮತ್ತೆ ಕೈ ಚಳಕ ತೋರಿದ್ದಾರೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗಜೇಂದ್ರಗಡ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
 

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೋಕಸಭೆಯ ಮಾಜಿ ಸ್ಪೀಕರ್​ ಸೋಮನಾಥ ಚಟರ್ಜಿ ಆರೋಗ್ಯ ಸ್ಥಿತಿಯಲ್ಲಿ ಏರುಪೇರು

ಕೋಲ್ಕತ್ತಾ : ಹಿರಿಯ ಕಮ್ಯೂನಿಸ್ಟ್ ಮುಖಂಡ ಮತ್ತು ಲೋಕಸಭೆಯ ಮಾಜಿ ಸ್ಪೀಕರ್​ ಸೋಮನಾಥ ಚಟರ್ಜಿ ಅವರ ಆರೋಗ್ಯ ...

news

ಬಿಜೆಪಿಯವರಂತೆ ಸದನದಲ್ಲಿ ಸಿಎಂ ಬ್ಲೂ ಫಿಲಂ ನೋಡ್ಬೇಕಾ ಎಂದ ಎಂಎಲ್ಸಿ!

ಸಿಎಂ ಕುಮಾರಸ್ವಾಮಿ ನಾಟಿ ಮಾಡಿರುವುದಕ್ಕೆ ಬಿಜೆಪಿ ಟೀಕೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರ ವಿರುದ್ಧ ...

news

ಕಸ್ತೂರಿ ರಂಗನ್ ವರದಿ: ಸುಪ್ರೀಂ ಕೋರ್ಟಗೆ ಸರಕಾರ ವರದಿ ಸಲ್ಲಿಸಲಿ

ಕಸ್ತೂರಿ ರಂಗನ್ ವರದಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಲು ಆಗಸ್ಟ್ 25 ಕೊನೆಯ ದಿನವಾಗಿದೆ. ಆದರೂ ಈಗಲೂ ...

news

ಸಿಎಂ ಭತ್ತ ನಾಟಿ: ಮಾಜಿ ಸಿಎಂ ಶೆಟ್ಟರ್ ಟಾಂಗ್

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಭತ್ತ ನಾಟಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ ಟಾಂಗ್ ...