ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದ ಯುವತಿಯ ತಂದೆ ತನ್ನ ಮಗಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ದೂರು ನೀಡಿ ಕೇಸ್ ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ್ದಾರೆ. ತಮ್ಮ ಮಗಳನ್ನು ಮಾರ್ಚ್ 2 ರಂದು ಅಪಹರಿಸಿ ಅಕ್ರಮವಾಗಿ ಬಂಧನದಲ್ಲಿಟ್ಟು, ನಕಲಿ ಸಿಡಿ ಮಾಡಿ ಮಾಧ್ಯಮಗಳಿಗೆ ಹರಿಯಬಿಟ್ಟು ಅವಮಾನ ಮಾಡಿದ್ದಾರೆ.ಮಾಧ್ಯಮಗಳಲ್ಲಿ ವಿಡಿಯೋ ನೋಡಿ ಮಗಳಿಗೆ ಕರೆ ಮಾಡಿದಾಗ ವಿಡಿಯೋದಲ್ಲಿರುವುದು ನಾನಲ್ಲ.