ಮಗ ಕಿಟ್ ಹಂಚುವ ಕೆಲಸ ಮಾಡುತ್ತಿದ್ದ ಅಷ್ಟೇ: ಆಕ್ಸಿಡೆಂಟ್ ಬಗ್ಗೆ ಲಕ್ಷ್ಮಣ್ ಸವದಿ ಹೇಳಿಕೆ

ಬೆಂಗಳೂರು| Krishnaveni K| Last Modified ಮಂಗಳವಾರ, 6 ಜುಲೈ 2021 (10:34 IST)
ಬೆಂಗಳೂರು: ಪುತ್ರ ಚಿದಾನಂದ ಸವದಿ ಕಾರು ಅಪಘಾತದ ಬಗ್ಗೆ ಡಿಸಿಎಂ ಲಕ್ಷ್ಮಣ್ ಸವದಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.  
> ಅಪಘಾತವಾದ ತಕ್ಷಣ ಚಿದು ಪರಾರಿಯಾಗಲು ಯತ್ನಿಸಿದ್ದಾನೆ ಎನ್ನುವುದು ಸುಳ್ಳು. ನನ್ನ ಪುತ್ರ ಚಿದು ಸ್ನೇಹಿತರ ಜೊತೆ ಕಳೆದ 20 ದಿನಗಳಿಂದ ಕಿಟ್ ಹಂಚುವ ಕೆಲಸ ಮಾಡುತ್ತಿದ್ದಾನೆ. ಅವನ ಸ್ನೇಹಿತರೆಲ್ಲರೂ ಇದಕ್ಕಾಗಿ ಭಾರೀ ಹೋರಾಟ ಮಾಡಿದ್ರು. ಹಾಗಾಗಿ ಎಲ್ಲಾ ಮುಗಿದ ಮೇಲೆ ಆಂಜನೇಯ ಬೆಟ್ಟಕ್ಕೆ ಹೋಗಿ ಬರೋಣ ಅಂತ ಹೋಗಿದ್ರು. ಬರ್ತಾ ಚಿದು ಮತ್ತು ಅವನ ಸ್ನೇಹಿತರು ಪ್ರತ್ಯೇಕವಾಗಿ ಎರಡು ಕಾರುಗಳಲ್ಲಿ ಬರ್ತಾ ಇದ್ರು.>   ಚಿದು ಗಾಡಿ ಮುಂದೆ ಹೋಗ್ತಾ ಇತ್ತು. ಅವನ ಗಾಡಿಯಲ್ಲಿ ನಾಲ್ಕೈದು ಜನ ಇದ್ರು. ಅಪಘಾತವಾದ ಗಾಡಿಯಲ್ಲಿ ಇನ್ನಷ್ಟು ಜನ ಸ್ನೇಹಿತರಿದ್ದರು. ಅಲ್ಲೊಂದು ಡಿವೈಡರ್ ಓಪನ್ ಇದ್ದ ಸ್ಥಳದಲ್ಲಿ ಮೋಟಾರ್ ಬೈಕ್ ನಲ್ಲಿ ಪಾಸ್ ಆಗ್ತಾ ಇತ್ತು. ಆಗ ಗಾಡಿ ಕಂಟ್ರೋಲ್ ಆಗದೇ ಹೊಡೆದಿದೆ. ಆಗ ಸ್ನೇಹಿತರು ಫೋನ್ ಮಾಡಿದ್ದಾರೆ. ಚಿದು ಮತ್ತೆ ಗಾಡಿಯಲ್ಲಿ ಹಿಂದೆ ಬಂದು ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿದು ಕೂಡಾ ಆಸ್ಪತ್ರೆಗೆ ಹೋಗಿ ಬಂದಿದ್ದಾನೆ. ಆದರೆ ಪಾಪ ಬೈಕ್ ನಲ್ಲಿದ್ದವರು ಮೃತಪಟ್ಟಿದ್ದಾರೆ. ಪೊಲೀಸ್ ತನಿಖೆ ನಡೆದಿದೆ’ ಎಂದು ಲಕ್ಷ್ಮಣ್ ಸವದಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :