ಇಂದಿನಿಂದ ಮೂರು ದಿನಗಳ ಕಾಲ ಬಾಹುಬಲಿ ಮಹಾಮಜ್ಜನ ಸಂಭ್ರಮ ಕಳೆಗಟ್ಟಲಿದೆ.ಇಂದಿನಿಂದ ಮಹಾಮಜ್ಜನ ಆರಂಭಗೊಂಡಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾ ಮಸ್ತಕಾಭಿಷೇಕ ಭಕ್ತರನ್ನು ಸೆಳೆಯುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶ್ರೀಕ್ಷೇತ್ರದಲ್ಲಿ ಭಕ್ತ ಸಾಗರ ಸೇರುತ್ತಿದೆ. 9 ಬಗೆಯ ದ್ರವ್ಯಾಭಿಷೇಕ, ಕ್ಷೀರ, ಹರಿತ, ಶ್ರೀಗಂಧ, ಅಷ್ಟಚಂದನ, ಚಂದನ, ಕೇಸರ, ಸೀಯಾಳ, ಕಷಾಯ, ಇಕ್ಷುರಸ, ಶ್ವೇತ ಕಲ್ಯಾಚೂರ್ಣ, ರಜತ ಪುಷ್ಪವೃಷ್ಟಿ, ಚತುಷ್ಕೋನ ಕಳಸ, ಶಾಂತಿಧಾರದ ಅಭಿಷೇಕ ನಡೆಯಲಿದೆ.ಮೆರವಣಿಗೆ ಮೂಲಕ ಮಜಾಮಜ್ಜನಕ್ಕೆ ಚಾಲನೆ ನೀಡಲಾಗುತ್ತದೆ.