ನಾಡಿನಾದ್ಯಂತ ಇಂದು ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಸಡಗರದಿಂದ ನಡೆದಿದೆ. ಪಾರಂಪರಿಕವಾಗಿ ಈ ಹಬ್ಬದ ಆಚರಣೆ ಮಾಡುವುದು ವಾಡಿಕೆ. ಪ್ರತಿವರ್ಷ ಆಷಾಢ ಮಾಸದಲ್ಲಿ ಬರೋ ಮಣ್ಣೆತ್ತಿನ ಅಮಾವಾಸ್ಯೆ ಕೃಷಿಕರಿಗೆ ಸಂಭ್ರಮದ ಹಬ್ಬಗಳಲ್ಲೊಂದು. ಉತ್ತರ ಕರ್ನಾಟಕದಲ್ಲಿ ಅದ್ರಲ್ಲೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರತಿ ಹಳ್ಳಿಯಲ್ಲೂ ಮಣ್ಣೆತ್ತಿನ ಅಮಾವಾಸ್ಯೆಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಬೆಳಿಗ್ಗೆ ಕುಟುಂಬ- ಪರಿವಾರ ಸಮೇತ, ಹೊಸ ಬಟ್ಟೆಗಳನ್ನು ಧರಿಸಿದ ಜನರು ದೇವಸ್ಥಾನಗಳಿಗೆ ತೆರಳಿ ಮಣ್ಣೆತ್ತಿನ ಪೂಜೆ ಮಾಡಿದ್ರು. ಎತ್ತು ಕೃಷಿಕರಿಗೆ ಆರಾಧ್ಯ