ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಗರ ಬಡಿದಿದೆ..ಕೇಂದ್ರದಿಂದ ಅಕ್ಕಿ ಸಿಗುವ ದಾರಿ ಸಂಪೂರ್ಣ ಬಂದ್ ಆಗಿದೆ..ಬೇರೆ ಮೂಲಗಳಿಂದಲೇ ಅಕ್ಕಿ ಪಡೆಯಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ..ಹೀಗಾಗಿ ಯೋಜನೆ ಮತ್ತಷ್ಡು ವಿಳಂಬವಾಗಲಿದೆ..ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರವೂ ಮುಂದುವರಿದಿದೆ.ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನ ಕೊಡ್ತೇವೆಂದಿದ್ದ ಕೇಂದ್ರ ಸರ್ಕಾರ ನಂತರ ಕೈಕೊಟ್ಟಿತ್ತು..ಆ ನಂತರ ಕೇಂದ್ರದ ವಿರುದ್ಧ ಕೈ ನಾಯಕರು ನಿರಂತರ ವಾಗ್ದಾಳಿ ನಡೆಸಿದ್ದರು..ಇತ್ತ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದರು..ಇದಾದ ಬಳಿಕ ಸಿಎಂ ದೆಹಲಿಯಲ್ಲಿ