ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿರೋದು ಮತ್ತೆ ಮಾದರಿಯಾಗಿದೆ. ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ನ್ನು ಆಟೋದಲ್ಲಿ ಬಿಟ್ಟು ಹೋಗಿರೋದನ್ನು ನೋಡಿ ಅವನ್ನು ಪೊಲೀಸರ ಮೂಲಕ ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಹುಬ್ಬಳ್ಳಿಯ ಟಿಪ್ಪು ನಗರದ ಮಹಮ್ಮದ್ ಜಾಫರ್ ಫನಿಬಂದ ಎಂಬುವರೇ ಬ್ಯಾಗ್ ಮರಳಿಸಿದ ಪ್ರಮಾಣಿಕ ಆಟೋ ಚಾಲಕ. ಆಟೋ ನಿಲ್ಲಿಸಿದ ಸಮಯದಲ್ಲಿ ಸೀಟಿನ ಹಿಂಭಾಗದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಚಾಲಕ, ಆ ಬ್ಯಾಗ್ ಮರಳಿ ಕೊಡೋದಕ್ಕೆ ಅಂತ