ವೃತ್ತಿಪರ ಕೋರ್ಸುಗಳಿಗೆ ಸಿಇಟಿ ಪರೀಕ್ಷೆ ಬರೆದಿದ್ದರೂ ವಿಶೇಷ ಪ್ರವರ್ಗಗಳ ಪ್ರಮಾಣಪತ್ರ ಮತ್ತು ಸಂಬಂಧಿತ ದಾಖಲೆಗಳನ್ನು ಇದುವರೆಗೆ ಸಲ್ಲಿಸದೆ ಇರುವ ಅಭ್ಯರ್ಥಿಗಳು ಜೂನ್ 2 ಅಥವಾ 6ರಂದು ಖುದ್ದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಇವುಗಳನ್ನು ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ. ಜೊತೆಗೆ ರಾಜ್ಯ ಪಠ್ಯಕ್ರಮ ಹೊರತುಪಡಿಸಿ ಬೇರೆಬೇರೆ ಪಠ್ಯಕ್ರಮಗಳಡಿಯಲ್ಲಿ 2023ರಲ್ಲಿ 12ನೇ ತರಗತಿ ಉತ್ತೀರ್ಣರಾಗಿದ್ದು, ಇದುವರೆಗೂ ತಮ್ಮ ಅಂಕಗಳ ವಿವರ ದಾಖಲಿಸದೆ ಇರುವವರಿಗೆ ಅನುಕೂಲವಾಗಲೆಂದು ಜೂನ್ 3ರ ಸಂಜೆ