ಮಂಕು ಬರಿಸಿ ಮಹಿಳೆಯ ಚೈನ್ ಎಗರಿಸಿದ ಚಾಲಾಕಿ

ಮಂಡ್ಯ| Jagadeesh| Last Modified ಮಂಗಳವಾರ, 1 ಅಕ್ಟೋಬರ್ 2019 (17:47 IST)
ಅಪರಿಚಿತೆಯೊಬ್ಬಳು ಮಹಿಳೆಯೊಬ್ಬರಿಗೆ ಮಂಕು ಬರಿಸಿ ಚಿನ್ನದ ಸರ ಎಗರಿಸಿ ಪರಾರಿಯಾಗಿರೋ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಕಿಕ್ಕೇರಿ ಪಟ್ಟಣದ ಮಂದಗೆರೆ ವೃತ್ತದಲ್ಲಿ ಅಪರಿಚಿತ ಮಹಿಳೆಯೆಯೊಬ್ಬಳು ಕಿಕ್ಕೇರಿ ಸಮೀಪದ ತೆಂಗಿನಘಟ್ಟ ಗ್ರಾಮದ ಲಕ್ಷಮ್ಮ ಎಂಬುವರಿಗೆ ಮಂಕು ಬರಿಸಿ ಮಾಂಗಲ್ಯದ ಚಿನ್ನದ  ಚೈನು (30 ಗ್ರಾಂ) ದೋಚಿರುವ ಘಟನೆ ನಡೆದಿದೆ.

ಲಕ್ಷ್ಮಮ್ಮ (50)  ಎಂಬುವರು ಅಂಗಡಿ ಸಾಮಗ್ರಿ‌ ಕೊಳ್ಳಲು ಕಿಕ್ಕೇರಿ ಪಟ್ಟಣಕ್ಕೆ ಬಂದಿದ್ದರು. ಅಪರಿಚಿತ ಮಹಿಳೆಯೊಬ್ಬಳು ಮಾತಾಡಿಸುವ ನೆಪದಲ್ಲಿ ಮಂಕು ಬರಿಸಿ ಚೈನು ಕಸಿದುಕೊಂಡಿದ್ದಾಳೆ.

ಅರ್ಧ ಗಂಟೆ ಬಳಿಕ  ಎಚ್ಚರಗೊಂಡ ಲಕ್ಷ್ಮಮ್ಮ ತಮ್ಮ ಚೈನು ನೋಡಿದಾಗ ಗಾಬರಿಯಿಂದ  ಅಲ್ಲಿಯೇ ಅತ್ತು ಕರೆದು ಕಿಕ್ಕೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಕಿಕ್ಕೇರಿ ಪೊಲೀಸ್ ಠಾಣೆಯ  ಎ ಎಸ್ ಐ ಗುರುಭಸಯ್ಯ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  


ಇದರಲ್ಲಿ ಇನ್ನಷ್ಟು ಓದಿ :