ಚಾಮರಾಜನಗರ ; ಆಕ್ಸಿಜನ್ ಕೊರತೆಯಿಂದ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಸಾವು

ಮೈಸೂರು| pavithra| Last Modified ಸೋಮವಾರ, 3 ಮೇ 2021 (10:26 IST)
ಮೈಸೂರು : ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ , ನಾನು ಮುಖ್ಯ ಕಾರ್ಯದರ್ಶಿಗೂ ಕರೆ ಮಾಡಿದ್ದೆ. ಆಕ್ಸಿಜನ್ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದೆ. ಮೈಸೂರಿಂದಲೂ ಆಕ್ಸಿಜನ್ ಪೂರೈಕೆ ಆಗಿಲ್ಲ. ಉಸ್ತುವಾರಿ ಸಚಿವರು ಕರೆ ಸ್ವೀಕಾರ ಮಾಡಲ್ಲ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಅವರ ಬಳಿ ಸಿಎಂ  ಬಿಎಸ್ ವೈ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ . ಮೃತರೆಲ್ಲರಿಗೂ ಬೇರೆ ಬೇರೆ ಕಾಯಿಲೆ ಇತ್ತು ಎಂದು ಡಿಸಿ ಹೇಳುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :