ಚಾಮರಾಜನಗರದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಜೋಡಿ ರಸ್ತೆ, ಜಿಲ್ಲಾಡಳಿತ ಭವನ ಸೇರಿದಂತೆ ಕೆಲ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿಂತಿದ್ದ ಮಳೆರಾಯನ ಆರ್ಭಟ ಮತ್ತೆ ಶುರುವಾಗಿದೆ. ರಾತ್ರಿಯಿಂದ ಬೆಳಗ್ಗೆವರೆಗೂ ನಿರಂತರ ಮಳೆ ಸುರಿದಿದ್ದು, ನಗರದ ಜನತೆ ಪರದಾಡುವಂತಾಗಿದೆ. ಜೋರು ಮಳೆ ಬಂತು ಎಂದರೆ ಸಾಕು ಜೋಡಿ ರಸ್ತೆ ಹಾಗೂ ಜಿಲ್ಲಾಡಳಿತ ಭವನದ ಮುಂದೆ ರಸ್ತೆಗಳು ನೀರು ಹೋಗದೇ ನದಿಗಳಂತಾಗುತ್ತದೆ. ಚಾಮರಾಜನಗರ ರಸ್ತೆ ಆಗಲೀಕರಣದ ವೇಳೆ