ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಿದ್ದು, ಇನ್ನೂ ಮೂರು ದಿನ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಿಸಿಲು ನಾಡು ಉತ್ತರ ಕರ್ನಾಟಕ ಅಕ್ಷರಶಃ ಮಲೆನಾಡು ಆಗಿ ಬದಲಾಗಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಎಲ್ಲೆಡೆ ಹಸಿರ ವಾತಾವರಣ ಕಾಣಿಸುತ್ತಿದೆ. ತುಂತುರು ಮಳೆಯ ಜೊತೆಗೆ ಗಾಳಿಯ ವೇಗ ಸಹ ಸ್ವಲ್ಪ ಹೆಚ್ಚಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ಯಾದಗಿರಿಯಲ್ಲಿ