ಬಿಜೆಪಿಗೆ ಮಾಡಿದ ಈ ದ್ರೋಹದಿಂದ ಚಂದ್ರಶೇಖರ್ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತದೆ ಕಿಡಿಕಾರಿದ ಸದಾನಂದಗೌಡ

ಬೆಂಗಳೂರು, ಗುರುವಾರ, 1 ನವೆಂಬರ್ 2018 (14:27 IST)

ಬೆಂಗಳೂರು : ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದು, ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುವುದರ  ಬಗ್ಗೆ ಇದೀಗ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅವರು ಚಂದ್ರಶೇಖರ್ ಅವರನ್ನು ರಾಮನಗರ ಜನ ಮತ್ತು ದೇವರು ಕ್ಷಮಿಸುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.


‘ಕಾಂಗ್ರೆಸ್ ನಲ್ಲಿ ಇದ್ದು ಅಲ್ಲಿನ ನಡವಳಿಕೆಗೆ ಬೇಸತ್ತು ಬಿಜೆಪಿ ಪಕ್ಷಕ್ಕೆ ಚಂದ್ರಶೇಖರ್ ಸೇರಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಅವರಿಗೆ ಟಿಕೆಟ್ ನೀಡಿ ಲೋಕಸಭಾ ಉಪಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು. ಆದರೆ ಈಗ ಅವರು ಬಿಜೆಪಿಗೆ ದ್ರೋಹ ಮಾಡಿ ಪಲಾಯನ ಮಾಡಿದ್ದಾರೆ. ಅವರನ್ನು ರಾಮನಗರ ಜನ ಮತ್ತು ದೇವರು ಕ್ಷಮಿಸುವುದಿಲ್ಲ ಇದರಿಂದ ಚಂದ್ರಶೇಖರ್ ಅವರ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತದೆ ಎಂದು ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚುನಾವಣಾ ಕಣದಿಂದ ಹಿಂದೆ ಸರಿದ ಚಂದ್ರಶೇಖರ್; ಯಡಿಯೂರಪ್ಪ ವಿರುದ್ಧ ಹೈಕಮಾಂಡ್‍ಗೆ ದೂರು ದಾಖಲು

ಬೆಂಗಳೂರು : ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದ ಸರಿದದ್ದಕ್ಕೆ ಬಿಜೆಪಿ ...

news

ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ; ಡಿಕೆ ಶಿವಕುಮಾರ್ ಸಹೋದರರ ಮೇಲೆ ಗರಂ ಆದ ಬಿಎಸ್ ವೈ

ಶಿವಮೊಗ್ಗ : ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದು, ಮತ್ತೆ ...

news

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಷಯ ಕೋರಿದ ಪ್ರಧಾನಿ ಮೋದಿ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪ್ರಧಾನಿ ಮೋದಿ ಕರ್ನಾಟಕದ ಜನತೆಗೆ ಟ್ವೀಟ್ ಮಾಡಿದ್ದು, ...

news

ರಾಮನಗರ ಚುನಾವಣಾ ಕಣದಲ್ಲಿ ಬಿಗ್ ಟ್ವಿಸ್ಟ್! ಬಿಜೆಪಿಗೆ ಶಾಕ್!

ಬೆಂಗಳೂರು: ರಾಮನಗರ ಲೋಕಸಭೆ ಉಪಚುನಾವಣೆಗೆ ಮೊದಲು ಅಭ್ಯರ್ಥಿ ಎಲ್ ಚಂದ್ರಶೇಖರ್ ಬಿಜೆಪಿಗೆ ದೊಡ್ಡ ಶಾಕ್ ...