ಬಿಎಂಟಿಸಿ ಬಸ್ ಎಲ್ಲಿದೆ ಎಂದು ತಿಳಿಸುವ ನಿಮ್ಮ ಬಸ್ಅಪ್ಲಿಕೇಶನ್ ಪ್ರಾರಂಭ ಮಾಡಲು ಈಗಾಗಲೇ ಮೂರರಿಂದ ನಾಲ್ಕು ಬಾರಿ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಬಿಡುಗಡೆಗೂ ಮುನ್ನವೇ ನಿಮ್ ಬಸ್ ಆ್ಯಪ್ ಹೆಸರು ಬದಲಾವಣೆಗೆ ಬಿಎಂಟಿಸಿ ಮುಂದಾಗಿದೆ. ನಿಮ್ಮ ಬಸ್ಅಪ್ಲಿಕೇಶನ್ ಬಳಕೆದಾರರಿಗೆ ಸರಿಯಾದ ಸಮಯದಲ್ಲಿ ಬಸ್ಗಳನ್ನು ಟ್ರ್ಯಾಕ್ ಮಾಡಲು ಮತ್ತು, ಪ್ರಯಾಣ ತೊಂದರೆಯಿಂದ ಮುಕ್ತವಾಗಿಸಲು ಸಹಕಾರಿಯಾಗಲಿದ್ದು,ಇತರ ಆಯ್ಕೆಗಳ ಜೊತೆಗೆ ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಗಳ ಮಾಹಿತಿಯನ್ನು ಸಹ ಇಲ್ಲಿ