ನವದೆಹಲಿ-ಮೋದಿ ಇವತ್ತು ಎಲ್ಲೇ ಹೋದರೂ ಸಾಲುಗಟ್ಟಲೆ ಲಕ್ಷಾಂತರ ಜನರ ಸಮಾಗಮವೆ ನೆರೆದು ಬಿಟ್ಟಿರುತ್ತೆ. ಯಾಕಂದ್ರೆ ಪ್ರಧಾನಿ ಹತ್ತತ್ತಿರ ೧೦ ವರ್ಷದಲ್ಲಿ ಏನೂ ಸಾಧಿಸಿದ್ದಾರೋ, ಏನೆಲ್ಲಾ ಮಾಡಿದ್ದಾರೋ ಅದು ಬೇರೆ ಮಾತು. ಆದ್ರೆ ಮೋದಿಯ ಮಾತಿನ ಮೋಡಿ, ಹಾವಭಾವ, ಮ್ಯಾನರಿಸಂ, ಹೀಗೆ ಎಕ್ಸೆಟ್ರಾ ಎಕ್ಸೆಟ್ರಾ ಕ್ವಾಲಿಟಿಗಳು ಅವರನ್ನ ಆ ಮಟ್ಟಿಗೆ ತಂದು ನಿಲ್ಲಿಸಿವೆ.ಮೋದಿಯವರ ವಾಕ್ಚಾತುರ್ಯ, ಅವರ ನಡೆ ನುಡಿ, ವಿದೇಶಗಳ ನಾಯಕರೊಂದಿಗೆ ನಡೆಸುವ ಮಾತುಕತೆ, ಇತರೆ ರಾಷ್ಟçಗಳ ಜೊತೆಗೆ ರಾಜತಾಂತ್ರಿಕವಾಗಿ ಭಾರತವನ್ನ ಅವರು ಮುನ್ನಡೆಸುವ ರೀತಿ ಸಹಜವಾಗಿಯೆ ನಮೋಗೆ ಒಂದಷ್ಟು ವರ್ಗಗಳ ಗೌರವ ಸಿಗುತ್ತೆ.