ಬೆಂಗಳೂರು: ಮಳೆಯಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯ ಅವಸ್ಥೆ ಹೇಳತೀರದಂತಾಗಿದೆ. ರಸ್ತೆಗೆ ಗುಡ್ಡ ಕುಸಿದು ಮೊನ್ನೆಯಿಡೀ ವಾಹನ ಸಂಚಾರರು ರಾತ್ರಿಯಿಡೀ ಪಡಬಾರದ ಪಾಡು ಪಟ್ಟ ಬೆನ್ನಲ್ಲೇ ಮತ್ತಷ್ಟು ಭೂಕುಸಿತವಾದ ವರದಿಯಾಗಿದೆ.ಮಂಗಳೂರು ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ 4 ತಿರುವುಗಳಲ್ಲಿ ಮತ್ತೆ ಭೂ ಕುಸಿತವಾಗಿದೆ. 6 ನೇ ತಿರುವಿನಲ್ಲಿ ರಸ್ತೆಯ ಕೆಳಭಾಗ ಕುಸಿಯಲು ಆರಂಭವಾಗಿದ್ದು, ಇದಾದರೆ ಇಲ್ಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ.ಈಗಾಗಲೇ ಮಂಗಳೂರು, ಧರ್ಮಸ್ಥಳ ಮುಂತಾದ ಕಡೆಗೆ ಬೆಂಗಳೂರಿನಿಂದ ಸಂಚರಿಸುವ